സ്കൂള്
കുടിവെള്ള പദ്ധതി പൂര്വ്വ
വിദ്യാര്ത്ഥിയും രക്ഷിതാവുമായ
ശ്രീ.ഹനീഫ്
ചര്ലടുക്ക ഉദ്ഘാടനം ചെയ്യുന്നു.
ಕುಡಿನೀರು ಯೋಜನೆ ಉದ್ಘಾಟನೆ
ಮಾನ್ಯ: ಸ್ಥಳೀಯ ಜ್ಞಾನೋದಯ ಶಾಲೆಯಲ್ಲಿ ಕುಡಿನೀರು ಯೋಜನೆಯ ಉದ್ಘಾಟನೆಯನ್ನು ಉದಾರ ದಾನಿ, ಉದ್ಯಮಿ, ಪ್ರಸ್ತುತ ಸಂಸ್ಥೆಯ ಹಳೆವಿದ್ಯಾರ್ಥಿ ಹಾಗೂ ರಕ್ಷಕರೂ ಆಗಿರುವ ಶ್ರೀ ಮಹಮ್ಮದ್ ಹನೀಫ ರವರು ನೆರವೇರಿಸಿದರು ತಾನು ಸಂಸ್ಥೆಯಲ್ಲಿ ಕಲಿತ ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಚಿಕ್ಕ ಧನ ಸಹಾಯವನ್ನು ಗುರು ದಕ್ಷಿಣೆಯಾಗಿ ಈ ಸಂಸ್ಥೆಗೆ ಸಮರ್ಪಿಸುತ್ತೇನೆಂದರು ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ-ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ಸಮದ್ ವಹಿಸಿದ್ದರು ಸುಮಾರು ಒಂದು ಲಕ್ಷ ರೂಪಾಯಿಗೂ ಮಿಕ್ಕಿದ ಈ ಯೋಜನೆಯಲ್ಲಿ ಉದಾರವಾಗಿ ಸಹಕರಿಸಿದ, ಸಂಸ್ಥೆಯಲ್ಲಿ ಸ್ಥಾಪಿಸಿರುವ ಇಂದಿರಾ ನರಸಿಂಹ ಫೇಮಿಲಿ ಟ್ರಸ್ಟ್‍ನ ಗೌರವಾಧ್ಯಕ್ಷರಾದ ಶ್ರೀ ಟಿ.ಎನ್.ರಾಜ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಧಾದೇವಿ ಹಾಗೂ ಶಾಲಾ ಅಧ್ಯಾಪಕ ವೃಂದದವರ ಪರವಾಗಿ ಅಧ್ಯಾಪಕ ವೃಂದದ ಕಾರ್ಯದರ್ಶಿ ಕೃಷ್ಣನ್ ಮಾಸ್ತರ್ ಹಾಗೂ ಜತೆ ಕಾರ್ಯದರ್ಶಿ ಶ್ರೀಮತಿ ಆಶಾಕಿರಣ್ ಇವರುಗಳಿಗೆ ಹಾಗೂ ಉದಾರವಾಗಿ ಪೈಪ್‍ನ ವ್ಯವಸ್ಥೆಯನ್ನು ಅಳವಡಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸೀತಾರಾಮ ಮಾಸ್ತರ್ ರವರಿಗೂ, ಅಲ್ಲದೆ ನೀರಿನ ಟಾಂಕಿಯನ್ನು ಉದಾರವಾಗಿ ನೀಡಿದ ಶಾಲಾ ಹಿರಿಯ ಅಧ್ಯಾಪಕರಾದ ಶ್ರೀ ಗೋವಿಂದನ್ ನಂಬೂದಿರಿ ಯವರಿಗೂ ಸ್ಮರಣಿಕೆಗಳನ್ನು ಶಾಲಾ ವ್ಯವಸ್ಥಾಪಕರಾದ ಶ್ರೀ ಯಂ.ಎ.ರವೀಂದ್ರ ಮಾಸ್ತರ್ ರವರು ನೀಡಿ ಕೃತಜ್ಞತೆಯ ನುಡಿಗಳೊಂದಿಗೆ ಗೌರವಿಸಿದರು ಸಮಾರಂಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಶ್ರೀಮತಿ ಸಂದ್ಯಾ.ವಿ.ಶೆಟ್ಟಿ ಹಾಗೂ ಶ್ರೀಮತಿ ಸುಧಾದೇವಿ ಟೀಚರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು ಶ್ರೀ ಯಂ.ಯಸ್.ನವೀನಚಂದ್ರ ಮಾಸ್ತರ್, ಶ್ರೀಮತಿ ಆಶಾಕಿರಣ್ ಟೀಚರ್, ಶ್ರೀ ಸುರೇಂದ್ರನ್ ಮಾಸ್ತರ್, ಪಿ.ವಿ.ಪ್ರದೀಪನ್ ಮಾಸ್ತರ್ ರವರು ಸಮಾರಂಭಕ್ಕೆ ಶುಭ ಹಾರೈಸಿದರು ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಕೃಷ್ಣನ್ ಮಾಸ್ತರ್ ವಂದಿಸಿದರು ರೆಜು ಮಾಸ್ತರ‍್ ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು

No comments:
Post a Comment